ಮಂಕುತಿಮ್ಮನ ಕಗ್ಗ:
ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಲೋಲ,
ದೇವ ಸರ್ವೇಶ ಪರಬ್ಬೊಮ್ಮನೆಂದು ಜನಂ||
ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ|
ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ||	(೧)

(ಕಾಣದೊಡಂ+ಅಳ್ತಿಯಂ) (ಪರಬ್ಬೊಮ್ಮಂ+ಎಂದು)

ಶ್ರೀ ವಿಷ್ಣು, ಪ್ರಪಂಚಕ್ಕೆ ಮೊದಲು ಮತ್ತು ಮೂಲನಾಗಿರುವವನು,ಮಾಯಲೋಲನಾಗಿರುವವನು, 
ದೇವರು, ಸರ್ವರಿಗು ಈಶನಾಗಿರುವವನು ಮತ್ತು ಪರಬ್ರಹ್ಮ(ಪರಬೊಮ್ಮ) ನೆಂದು ವಿವಿಧವಾದ 
ನಾಮಾವಳಿಗಳಿಂದ ಜನಗಳು ಯಾವುದನ್ನು ಕಾಣದಿದ್ದರು ಪ್ರೀತಿಯಿಂದ(ಅಳ್ತಿಯಿಂ) ನಂಬಿರುವರೋ,
ಆ ವಿಚಿತ್ರಕ್ಕೆ ನಮಿಸು.

ನೋಡಿ
೧. ಶ್ರೀ ವಿಷ್ಣು ವಿಶ್ವಾದಿಮೂಲ,
ಶ್ರೀ ವಿಷ್ಣು ವಿಶ್ವಾದಿಮೂಲ= ಮಂಕುತಿಮ್ಮನ ಕಗ್ಗ - ತಾತ್ಪರ್ಯಇದು ಹಿಂದಿನ ಸಂಪಾದನೆ

ಪರಿವಿಡಿ

ವರ್ಗ:ಮಂಕುತಿಮ್ಮನ ಕಗ್ಗವರ್ಗ:ಕನ್ನಡ ಸಾಹಿತ್ಯ.